ಪಯಣದ ದಾರಿಯಲ್ಲಿ
ಪಯಣದ ದಾರಿಯಲ್ಲಿ
ಕಂಡ ನೋಟಗಳ ಸೊಗಸು
ಸಾಲು ಸಾಲು ದೃಶ್ಯಗಳಲ್ಲಿ
ಅರಳುವ ಪ್ರಪುಲ್ಲ ಮನಸ್ಷು
ಹಸಿರ ಹಾಸಿದ ಗಿಡ ಮರ ಬಳ್ಳಿ
ಕಣ್ತುಂಬುವ ಧಿರಿಸು
ಕ್ರಮಿಸುವ ಸೂರ್ಯ ಪ್ರಭುವಿನ
ಕಣ್ಣು ಮುಚ್ಚಾಲೆಯ ತಪಸ್ಸು
ದಟ್ಟೈಸಿದ ಮೋಡ ಸುರಿವ ಮಳೆ
ಹರಿವ ಹಳ್ಳ ಕೊಳ್ಳದ ಬಿರಸು
ತಂಪ ಗಾಳಿಗೆ ಅಪ್ಪಿಕೊಂಡ ನಿದ್ದೆ
ದಾಖಲಾಗದ ಬಿದ್ದ ಕನಸು.
-ಡಾ. ಪ್ರಕಾಶ ಗ. ಖಾಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ