ನಾಕು ಸಾಲು
ಡಾ.ಪ್ರಕಾಶ ಗ.ಖಾಡೆ
ಅಡಿಗಡಿಗೆ ಇವೆ ಗುಡಿಗಳು
ಚರ್ಚ ಮಸೀದಿಗಳು ;
ಆದರೂ ತುಂಬುತ್ತಿವೆ ಪತ್ರಿಕೆಯಲ್ಲಿ
ಅಪರಾಧ ಪುಟಗಳು.
********
ಬಿಸಿಲೇ ಬರಬೇಕಿಲ್ಲ
ಬೆಳಗಿನ ಮಂಜು ಕರಗಲು;
ನೊಂದವರ ನಿಟ್ಟುಸಿರಿಗೆ
ಎಲ್ಲ ಬಟಾಬಯಲು.
*********
ಕಡಿದು ಒಗೆದ ಮರದ ತುಂಡು ತುಂಡುಗಳಲ್ಲಿ
ಉರಿವ ಬೆಂಕಿಯ ಶಕ್ತಿಯಿದೆ ;
ದುಡಿವ ಜನರ ಬೆವರ ಹನಿ ಹನಿಯಲ್ಲಿ
ಜಗವ ಕಟ್ಟುವ ಭವಿಷ್ಯವಿದೆ.
******
ಕವಿತೆ ಕಟ್ಟಲು ಕವಿಗಳೆಲ್ಲ ಸೇರಿ
ಶಬ್ದಗಳ ಹುಡುಕಿ
ಕಾಡಿಗೆ ಹೊರಟರು ;
ವನದೈಸಿರಿಯಲ್ಲಿ
ನಲಿಯುತ್ತಿದ್ದ ಗಿಳಿಕೋಗಿಲೆಗಳು
ಕೂಗ ಮರೆತು
ಮೌನಕ್ಕೆ ಶರಣಾದವು.
******
ಗಾಳಿ ಬಂದಾಗ
ತೂರಿಕೊಂಡವರು ;
ಬೆಂಕಿ ಕಾಯಿಸಿ
ಕೊಳ್ಳುತ್ತಿದ್ದಾರೆ
ಹಸಿ ಕಟ್ಟಿಗೆ ಹೊತ್ತಿಸಿ.
********
ಸುಮ್ಮನೆ ಸುತ್ತುತ್ತಿಲ್ಲ
ಹೊಲಗದ್ದೆಗಳ ತುಂಬ
ಗೀಜಗನ ಹಕ್ಕಿ ;
ಗೂಡು ಕಟ್ಟಿ ಬದುಕ ಕಟ್ಟಿಕೊಳ್ಳಲು
ಕೂಡಿಡುತ್ತಿದೆ
ಹುಲುಕಡ್ಡಿಗಳ ಹೆಕ್ಕಿ.
*****
ಕವಿಗೆ ಒಲಿದ ಕವಯತ್ರಿ
ಕವಿತೆಯ ಸವತಿ ;
ಕವಯತ್ರಿಗೆ ಒಲಿದ ಕವಿ
ಸೇರಿಕೊಂಡ ಗವಿ.
*****
ಬೆಕ್ಕು ಅಡ್ಡ ಬಂತೆಂದು
ಹಿಂದಕ್ಕೆ ಹೋದರು :
ನಸು ನಕ್ಕು ಹುಲುಪ್ರಾಣಿ
ಮುಂದಕ್ಕೆ ಹೋಯಿತು.
*******
ಛೇ!
ನಿಮ್ಮೊಂದಿಗೆ ನನ್ನಕನಸುಗಳ
ಹಂಚಿಕೊಳ್ಳಬಾರದಿತ್ತು ;
ಮುನಿಸಿಕೊಂಡು ಹೊರಟು ಹೋಗಿವೆ
ನಿದಿರಿಗೆ ಬಾರದೆ ಬೆಳಗಿನ ಹೊತ್ತು.
******
ಮುಟ್ಟಿದ ಮೇಲೆ ಪತ್ರ ಬರೆಯಿರಿ
ಅನ್ನುತ್ತಿದ್ದರು ಕಳಿಸ ಬಂದವರು;
ತುಂಬಿಕೊಂಡಿತ್ತು ಸಂವಹನದ
ಬರವಣಿಗೆಯ ಭಾವದುಸಿರು.
*******
ಭ್ರಮೆಗಳಲ್ಲಿ
ಕಟ್ಟಿಕೊಂಡ ಬದುಕು ;
ಉಳಿದಿಲ್ಲ
ದಾಖಲೆಗೆ ಎದಕು.
******
ಪಾಲು ಹಾಕಲು ಕುಳಿತಿದ್ದಾರೆ
ದುಡಿದು ತಂದ ಅಕ್ಕಡಿ :
ದುಡಿಯದಿದ್ದರೂ ಉಳ್ಳವರ
ಕಡೆ ವಾಲುತ್ತೆ ತಕ್ಕಡಿ.
******
ಮೇಲೆ ಹತ್ತಿ ಹೋದವರು
ಮರೆಯಬಾರದು ನೆಲದ ಮೂಲ :ಕೆಳಗೆ ಇಳಿದು ಬಂದವರು
ಹಿಡಿಯಬಾರದು ಕಂಡವರ ಕಾಲ.
*******
ಕತ್ತಲೆಗೆ ಧ್ವನಿಯಾಗಿದ್ದಾರೆ
ಬೆಳಕ ತಂದವರು ;
ಎಷ್ಟೊಂದು ಬಯಲು ತುಂಬಿದೆ
ಶ್ರಮದ ಬೆವರು.
ಎಷ್ಟೊಂದು ಬಯಲು ತುಂಬಿದೆ
ಶ್ರಮದ ಬೆವರು.
*******
ಆಕಾಶವನ್ನು ದಿಟ್ಟಿಸುತ್ತಾ
ಎಷ್ಟೋ ಬಾರಿ ಕುಳಿತಿದ್ದೇನೆ ಇಲ್ಲಿ;
ಹರಿವ ಹಳ್ಳ ಹಾಡುವ ಗಿಳಿ ಕೋಕಿಲ
ಒಂದು ಕಾಣುತ್ತಿಲ್ಲ,ಈಗ ಅವೆಲ್ಲ ಎಲ್ಲಿ?
ಎಷ್ಟೋ ಬಾರಿ ಕುಳಿತಿದ್ದೇನೆ ಇಲ್ಲಿ;
ಹರಿವ ಹಳ್ಳ ಹಾಡುವ ಗಿಳಿ ಕೋಕಿಲ
ಒಂದು ಕಾಣುತ್ತಿಲ್ಲ,ಈಗ ಅವೆಲ್ಲ ಎಲ್ಲಿ?
*******
'ಒಂದು ಕೆಲ್ಸ ಮಾಡಿ' ಎಂದರು
ದಾರಿ ತೋರಿಸಲು ಕೇಳಿದ್ದಕ್ಕೆ;
ಎಷ್ಟೊಂದು ಕೆಲಸ ಮಾಡಿದರೂ
ದಾರಿ ಸಿಗದವರಿದ್ದಾರೆ ನಮ್ಮ ಮಧ್ಯೆ.
ದಾರಿ ತೋರಿಸಲು ಕೇಳಿದ್ದಕ್ಕೆ;
ಎಷ್ಟೊಂದು ಕೆಲಸ ಮಾಡಿದರೂ
ದಾರಿ ಸಿಗದವರಿದ್ದಾರೆ ನಮ್ಮ ಮಧ್ಯೆ.
*********
ಛೇ ! ಇನ್ನೂ ನಿಂತಿಲ್ಲ
ಈ ಬಿಕ್ಕಳಿಕೆ ;
ಯಾರು ನೆನಸುತ್ತಿರಬಹುದು
ಈ ಘಳಿಗೆ.
ಈ ಬಿಕ್ಕಳಿಕೆ ;
ಯಾರು ನೆನಸುತ್ತಿರಬಹುದು
ಈ ಘಳಿಗೆ.
*********
ಕಥೆ ಹೇಳುತ್ತಿವೆ ದಾರಿಗುಂಟ
ಎದ್ದ ಕಲ್ಲು ಕಟ್ಟಡಗಳು;ದೈತ್ಯ ಯಂತ್ರಗಳಡಿಯಲ್ಲಿ ಸಿಲುಕಿ
ಮರೆಯಾಗಿವೆ ಗಿಡ ಮರಗಳು.
********
ಕವಿತೆಗೆ ಹೇಳಿ ಕಳಿಸಿದ್ದಾರೆ
ಲಯ ಭಾವದ ಗೆಳತಿಯರು :
ಬಿಟ್ಟಿರಬೇಡ ಕವಿಯ ಚಿತ್ತ
ಬದುಕ ಬರಹನರಿಯಲು.
ಲಯ ಭಾವದ ಗೆಳತಿಯರು :
ಬಿಟ್ಟಿರಬೇಡ ಕವಿಯ ಚಿತ್ತ
ಬದುಕ ಬರಹನರಿಯಲು.
*******
ಬೇಂದ್ರೆ ಬ್ಯಾರೆ ಅಲ್ಲಾ
ಧಾರ್ವಾಡ ಬ್ಯಾರೆ ಅಲ್ಲಾ
ಭಾಷೆ ಹ್ಯಾಂಗ ಬ್ಯಾರೆ ಆಗತೈತಿ;
ಓದು ಮಂದೀನ ದೊಡ್ಡವರಾದರ
ಬರದವರ ಬೆಳಕ ತಿಳಿತೈತಿ.
ಧಾರ್ವಾಡ ಬ್ಯಾರೆ ಅಲ್ಲಾ
ಭಾಷೆ ಹ್ಯಾಂಗ ಬ್ಯಾರೆ ಆಗತೈತಿ;
ಓದು ಮಂದೀನ ದೊಡ್ಡವರಾದರ
ಬರದವರ ಬೆಳಕ ತಿಳಿತೈತಿ.
********
ಪುಣ್ಯದ ಹೊಳೆಯಲ್ಲಿ ಮುಳಿಗೆದ್ದು
ಬಂದವರು ಪಾಪ ತೊಳೆಯಿತೆಂದರು;
ಹೊಸ ಪಾಪಗಳ ಶುರುವಿಡಲು ನವೀಕರಣ
ಮಾಡಿದ್ದು ಸರಿಯಾಯಿತೆಂದರು.
ಬಂದವರು ಪಾಪ ತೊಳೆಯಿತೆಂದರು;
ಹೊಸ ಪಾಪಗಳ ಶುರುವಿಡಲು ನವೀಕರಣ
ಮಾಡಿದ್ದು ಸರಿಯಾಯಿತೆಂದರು.
********
ಹರಿದ ಸಂಬಂಧಗಳ ಬೆಸುಗೆಗೆ
ಬೇಕು ಮನದ ಕಕ್ಕುಲತೆ ;
ಮುರಿದ ಮನಸುಗಳ ಕಟ್ಟಲು
ಬೇಕು ಹೃದಯ ವೈಶ್ಯಾಲತೆ.
ಬೇಕು ಮನದ ಕಕ್ಕುಲತೆ ;
ಮುರಿದ ಮನಸುಗಳ ಕಟ್ಟಲು
ಬೇಕು ಹೃದಯ ವೈಶ್ಯಾಲತೆ.
********
ಕತ್ತಲಾವರಿಸಿದ ರಾತ್ರಿಗೆ
ನಿದಿರೆಯ ಹೂ ಹಾಸಿಗೆ ;
ತಣ್ಣಗೆ ಮಲಗಿದ ಹೊತ್ತಿಗೆ
ಕನಸುಗಳ ಮೆರವಣಿಗೆ.
ನಿದಿರೆಯ ಹೂ ಹಾಸಿಗೆ ;
ತಣ್ಣಗೆ ಮಲಗಿದ ಹೊತ್ತಿಗೆ
ಕನಸುಗಳ ಮೆರವಣಿಗೆ.
******
ರಾತ್ರಿಗೆ ನಕ್ಷತ್ರಗಳು
ಜೊತೆಯಾದವು ;
ಕವಿತೆಯ ರೂಪಕ್ಕೆ
ಬೆಳಕಾದವು.
*******
ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟ.
ಮೊ.9845500890
ಕವಿತೆಯ ರೂಪಕ್ಕೆ
ಬೆಳಕಾದವು.
*******
ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟ.
ಮೊ.9845500890

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ